Monday, September 23, 2013

ದುರಂತ ಪ್ರವಾಸ (ಕಥನ)

          ರಭಸವಾಗಿ ಗಾಳಿ ಮುಖಕ್ಕೆ ಹೊಡೆಯುತ್ತಿತ್ತು. ಕ್ಲಚ್-ಅನ್ನು ಹಿಡಿದು, ಗೇರ್ ಮುಂದಕ್ಕೆರಿಸಿದ ಬಾಳು, ಹೆದ್ದಾರಿಯಲ್ಲಿ ೮೦ ರ ವೇಗದಲ್ಲಿ ತನ್ನ ದ್ವಿಚಕ್ರ ವಾಹನವನ್ನು ಹಾರಿಸತೊಡಗಿದ. ಹಿಂದೆಯೇ ಕೂತಿದ್ದ ತಂಗಿ ಸಂಜನಾ, ವೇಗಕ್ಕೆ ಹೆದರದೆ ಅಣ್ಣನನ್ನು ಬಿಗಿಯಾಗಿ ಅಪ್ಪಿ ಕುಳಿತಿದ್ದಳು.

          ರಸ್ತೆಯನ್ನು ನೋಡುತ್ತಾ, ಹುಷಾರಾಗಿ ಚಲಿಸುತಿದ್ದ ಬಾಳು ತನ್ನ ದಿನದ ಶುರುವನ್ನು ಮೆಲುಕು ಹಾಕಿದ. ಎಲ್ಲ ತಾನು ಅಂದುಕೊಂಡಂತೆ ನಡೆಯಿತೆಂದು ಖುಷಿ ಪಟ್ಟನು.

          "ನಿಲ್ಲು!... ನಿಲ್ಲು!..." ಎಂದು ಸಂಜನಾ ಜೋರಾಗಿ ಕಿರುಚಿದಳು. ಕಲ್ಪನೆಯಲ್ಲಿ ಕಳೆದುಹೋಗಿದ್ದ ಬಾಳು ಎಚ್ಚರನಾಗಿ ಬ್ರೇಕ್ ಜೋರಾಗಿ ಒತ್ತಿದ. "ಏನು??!!... ಎನಾಇತು??!.." ಎಂದು ಗಾಬರಿಯಿಂದ ಕೇಳಿದ.

          "ನಾವೇಕಡೆ ಬರಬಾರದಿತ್ತು!...ಅಲ್ಲೇ ನಾನು ಬೋರ್ಡ್ ನೋಡಿದೆ. ಫಾಲ್ಸ್-ಗೆ ಆಕಡೆ ಹೋಗಬೇಕೆಂದು ಹಾಕಿತ್ತು." ಎನ್ನುತ್ತಾ ಕೈ ಸನ್ನೆ ಮಾಡಿದಳು.

          "ಸರಿ ಸರಿ... ಆ ಕಡೆನೇ ಹೋಗೋಣ..." ಎಂದು ಹೇಳಿ ವಾಹನವನ್ನು ತಿರುಗಿಸಿ ಸ್ವಲ್ಪ ದೂರ ಚಲಿಸಿ ಬಲಕ್ಕೆ ತಿರುಗಿದನು.

          ಅರ್ಧ ಘಂಟೆಯ ದಾರಿ, ನಂತರ ದೊಡ್ಡ ಹಸಿರು ಫಲಕ ಅವರನ್ನು ಸ್ವಾಗತಿಸಿತು. ಸಂಜನಾ ಹುಚ್ಚೆದ್ದು ಕುಣಿಯುತಿದ್ದಳು. ವಾಹನವನ್ನು ನಿಲುಗಡೆ ಸ್ಥಾನದಲ್ಲಿ ನಿಲ್ಲಿಸಿ, ತಂದಿದ್ದ ದೊಡ್ಡ ಬ್ಯಾಗ್-ಅನ್ನು ಬೆನ್ನಿಗೇರಿಸಿ, ತನ್ನ ೨೦ ವರ್ಷದ ತಂಗಿಯ ಭಿಜದ ಮೇಲೆ ಕೈ ಹಾಕಿ, ಇಬ್ಬರು ಮಾತನಾಡುತ್ತ ನಡೆದರು

          ಸಂಜನಳ ಖುಷಿ ಹೇಳತೀರಲಾಗದು. ಝರಿಯ ಸದ್ದು ದೂರ ದೂರಕ್ಕೂ ಕೇಳಿಸುತ್ತಿತ್ತು. ವರ್ಷಧಾರೆಯಾಗುತ್ತಿರುವ ಹಾಗೆ ಭಾಸವಾಗುತಿತ್ತು. ಕೊನೆಗೂ ಎತ್ತರದಲ್ಲಿ ತುತ್ತ ತುದಿಗೆ ಬಂದು ನಿಂತರು.

          ಹಾಲು ಬಡೆಯ ಮೇಲೆ ಜಿನುಗಿದಂತೆ ಎಡರುಗಡೆಯ ದೃಶ್ಯ ಕಂಡು ಬಂತು. ಸುಂದರವಾದ ನೋಟ. ದೂರ ದೂರಕ್ಕೆ ಚಾಚಿದ ಬೆಟ್ಟ. ಅಲ್ಲಲ್ಲಿ ಸಣ್ಣ ಸಣ್ಣ ಝರಿಗಳು. ದೂರದಲ್ಲಿ ಮನುಷ್ಯರು ಇರುವೆಗಳಂತೆ ಕಂಡು ಬಂದರು. ಜಲಪಾತದ ತುದಿಯಲ್ಲಿ, ರಭಸವಾಗಿ ಸುರಿಯುವ ನೀರನ್ನು ಅನುಭವಿಸುತ್ತ ಜನರು ಕುಳಿತಿದ್ದರು..

          "ವಾವ್!!..." ತಕ್ಷಣಕ್ಕೆ ಸಂಜನಳ ಬಾಯಿಂದ ಬಂದ ಪದ. ಬಾಳು ತನ್ನ ಬಾಯಿಯ ಹತ್ತಿರ ಕೈ ಹಿಡಿದು "ಹೋ......" ಎಂದು ಕಿರುಚಿದನು. ಪ್ರತ್ಯುತ್ತರವೆನ್ನುವಂತೆ ನಾಲ್ಕೈದು ಸತಿ ಅದೇ ಸದ್ದು ಕೇಳಿ ಬಂತು.

          "ನಡಿ ನಡಿ ಕೆಳಗೆ ಹೋಗೋಣ...! ಅಲ್ಲಿ ಇನ್ನು ಚೆನ್ನಾಗಿರುತ್ತೆ!. ಮಜಾ ಮಾಡಬಹುದು..ಬೇಗ ನಡಿ!!!" ಎನ್ನುತ್ತಾಳೆ ತಂಗಿಯ ಕೈಯನ್ನು ಹಿಡಿದೆಳೆದು ಮೆಟ್ಟಿಲತ್ತ ಓಡಿದ. ಅಣ್ಣನ ಊಟಕ್ಕೆ ಸರಿಸಮನಾಗಿ ಓಡಲು ಸಂಜನಾ ಒದ್ದಾಡಿದಳು.

'ಕೆಳಗೆ ಹೋಗಿ, ಮೊದಲು ಬಟ್ಟೆ ಬಿಚ್ಚಿ ನೀರಿಗೆ ಧುಮುಕಬೇಕು! ಸಂಜನಳಿಗೆ ಆಶ್ಚರ್ಯವಾಗುವಂತೆ ಅವಳಿಗೆ ಗೊತ್ತಾಗದಂತೆ ಅವಳ ಮೇಲೆ ನೀರೆರಿಚಬೇಕು. ಒಟ್ಟಿನಲ್ಲಿ ಫುಲ್ ಮಜಾ ಮಾಡಬೇಕು'. ಎಂದು ಮನದಲ್ಲಿ ನೆನೆದು ಮೆಟ್ಟಿಲನ್ನು ಇನ್ನು ಜೋರಾಗಿ ಇಳಿಯತೊಡಗಿದ.

ಬಂದೆ ಬಿಟ್ಟಿತು. ಜಲಪಾತದ ತುದಿ. ಅಲ್ಲಿಂದ ಸ್ವಲ್ಪ ಕೆಳಗೆ ಹರಿದು ಮತ್ತೊಂದಷ್ಟು ವಿಶಾಲ ಜಾಗ. ಅಲ್ಲಿಂದ ಜಲಪಾತ ಮುಂದುವರೆದು ಪ್ರಪಾತಕ್ಕೆ ನೀರು ಜಿಗಿಯುತ್ತದೆ.

ಬಂದಿದ್ದ ಜಾಗವಂತೂ ಇಬ್ಬರ ಕಣ್ಮನ ಸೆಳೆದಿತ್ತು. "ಇಲ್ಲಿ ಬ್ಯಾಗ್ ಇಡೋಣ..."ಎಂದು ಚೀರುತ್ತಾ ಸಂಜನಳಿಗೆ ಹೇಳಿದ ಬಾಲು. "ಹಾಂ?? ಏನ್ ಹೆಳಿದೋ ಏನು ಕೇಳಿಸಲಿಲ್ಲ!! ಇನ್ನೊಂದ್ ಸತಿ ಹೇಳು!" ಎಂದು ಅವಳು ಕಿರುಚಿದಳು.

"ಇಲ್ಲಿ ಬ್ಯಾಗ್ ಇಡೋಣ. ನಾನು ನೀರಿಗೆ ಇಳಿತೀನಿ" ಎಂದು ಇನ್ನು ಗಟ್ಟಿಯಾಗಿ ಹೇಳಿದ.

ಈ ಸತಿ ಏನೋ ಸ್ವಲ್ಪ ಕೇಳಿತು ಸಂಜನಳಿಗೆ. "ಸರಿ....!!" ಎಂದು ಕಿರುಚಿ ಅಲ್ಲ್ವ್ ಬಂಡೆಯ ಮೇಲೆ ಕುಳಿತಳು. ಬಾಲು ಬ್ಯಾಗ್-ಅನ್ನುಅವಳ ಹತ್ತಿರ ಇಟ್ಟು, ಅವಳನ್ನು ನೋಡಿ ಪ್ರೀತಿಯಿಂದ ಕಣ್ ಹೊಡೆದು ನಕ್ಕನು.

ಬಟ್ಟೆ ಕಳಚಿ, ಬರಿಯ ಪ್ಯಾಂಟ್-ನಲ್ಲಿ ನಿಂತ. ಬಿಸಿಲಿನ ಬೇಗೆ, ಪಕ್ಕದಲ್ಲಿ ನೀರು. ಇನ್ನೇನ್ ಬೇಕು? ಹಾಯದ ಭಾನುವಾರ. 'ಜಸ್ಟ್ ಪರ್ಫೆಕ್ಟ್' ಎಂದು ಮನದಲ್ಲಿ ನೆನೆದು ನೀರಿಗಿಳಿದನು.

ಅಲ್ಲೇ ಪಕ್ಕದಲ್ಲೊಂದು ಕುಟುಂಬ ತಮ್ಮ ನೀರಿನಾಟವನ್ನು ಮುಗಿಸಿ ಹಿಂದಿರುಗಲು ತಯಾರಿ ನಡೆಸಿತ್ತು. ಈಗ ಇವರಿಬ್ಬರನ್ನು ಬಿಟ್ಟು ಆ ಸ್ಥಳದಲ್ಲಿ ಯಾರೂ ಇರಲಿಲ್ಲ. ದೂರದ ದೊಡ್ಡ ಬಂಡೆಯಮೇಲೆ ಕೆಂಪು ಬಣ್ಣದಲ್ಲಿ ದೊಡ್ಡದಾಗಿ "ಅಪಾಯ" ಎಂದು ಬರಿದಿತ್ತು. ಇದನ್ನು ಲೆಕ್ಕಿಸದ ಇವರು, ತಮ್ಮ ಲೋಕದಲ್ಲಿ ಮುಳುಗಿದರು.

ಬಿಸಿಲಿನ ಬೇಗೆಗೆ ಮುಖ ಮುಚ್ಚಿ ಕುಳಿತಿದ್ದ ಸಂಜನಾ ಬೆಚ್ಚಿ ಬಿದ್ದಳು. ಅಚಾನಕ್ಕಾಗಿ ಅವಳ ತಲೆಯಿಂದ ನೀರು ಸುರಿಯುತಿತ್ತು. "ಹ್ಹ ಹ್ಹ ಹ್ಹ" ಎಂದು ಜೋರಾಗಿ ನಗುತಿದ್ದ ಅಣ್ಣ. ನಂತರ ಅವಳ ತಲೆಯ ಮೇಲೆ ಅಣ್ಣ ನೀರುಚಿದ್ದು ಅರಿವಾಯ್ತು.

"ಅಣ್ಣಾ!!!...." ಎಂದು ಗಟ್ಟಿಯಾಗಿ ಕೋಪದಿಂದ ಕೂಗಿ ಮಗುವಿನ ತರಹ ಅಳುವಂತೆ ಅನಕವಾಡಿದಳು. "ಬಟ್ಟೆಯೆಲ್ಲ ಒದ್ದೆ ಮಾಡಿಬಿಟ್ಟೆ!! ನೀನು ತುಂಬಾ ಕೆಟ್ಟವನು!" ಎಂದು ಪ್ರೀತಿಯಿಂದ ಬೈದಳು.

"ಅಲ್ಲೇ ಸ್ವಲ್ಪ ಹೊತ್ತು ಬಂದೆ ಮೇಲೆ ಒರಗಿಕೊ. ತಂತಾನೇ ಒಣಗಿ ಹೋಗುತ್ತೆ. ಹೋಗು" ಎಂದು ನಗುತ್ತಾ ಬಾಲು ಇನ್ನು ಹೆಚ್ಚು ನೇರೆರೆಚತೊಡಗಿದನು. ಖುಷಿಯಿಂದ, ಪ್ರೀತಿಯಿಂದ ಕೋಪದಿಂದ ಸಂಜನಾ ಎದ್ದು ಅಣ್ಣನ ಜೊತೆ ನೀರಿಗಿಳಿದಳು.

"ಅಬ್ಬಾ!!" ಎಂದು ಜೋರಾಗಿ ಕಿರುಚಿದಳು.
"ಇಲ್ಲ ಇಲ್ಲ... ನಾನ್ ನಿನ್ನ ಹಿಡಿದುಕೊಂಡಿದ್ದಿನಿ. ಭಯ ಪಡಬೇಡ." ಎಂದು ಜಾರಿ ಬೀಳುತಿದ್ದ ತಂಗಿಯನ್ನು ಹಿಡಿದು ಬಾಲು ಹೇಳಿದನು.
"ಆದ ಹೇಗೆ ನಿಂತಿದ್ಯಾ.! ಇಷ್ಟೊಂದು ಜೋರಾಗಿ ನೀರು ಹರಿತಾಇದೆ. ನಂಗಂತೂ ನ್ಲ್ಲೋಕೆ ಆಗ್ತಿಲ್ಲ. ನಾನು ವಾಪಸ್ ಹೋಗ್ತೀನಪ್ಪ. ನೀನು ಬಾ. ಬೇಡ ಹೋಗೋದು!" ಎಂದು ಭಯದಿಂದ ನುಡಿದಳು ಸಂಜನಾ.
"ನೀನ್ ಹೋಗು ನಾನ್ ಬರ್ತೀನಿ"
"ತುಂಬಾ ಮುಂದೆ ಹೋಗಬೇಡ. ಆಳ ಇದೆ. ಹುಷಾರು!"
"ಸರಿ ಸರಿ. ನೀನ್ ಹೋಗ ಕೂತ್ಕೋ" ಎಂದ ಬಲು.

ನೀನಿನಲ್ಲಿ ನೆಂದು ತೊಪ್ಪೆಯಾಗಿದ್ದ ಸಂಜನಾ ಬಿಸಿಲಿನಲ್ಲಿ ಬಂದು ಕುಳಿತಳು. ಜಡೆಯನ್ನು ಬಿಚ್ಚಿ ಒಣಗಿಸತೊದಗಿದಳು.ಆಗಾಗ ಅಣ್ಣನನ್ನು ನೋಡುತ್ತಾ ಕುಳಿತಳು.

ಹಾಲಿನಂತೆ ಉಕ್ಕಿ ಮೇಲಿಂದ ಹರಿಯುತಿದ್ದ ನೀರನ್ನು ನೋಡಿ ಕುಳಿತ ಸಂಜನಾ ಅಚಾನಕ್ಕಾಗಿ ಎಚ್ಚೆತ್ತು ಕುಳಿತಳು.
ಯಾರೋ ತನ್ನ ಹೆಸರು ಕರೆದಂತಾಯಿತು.
"ಸಂಜನಾ....ಸಂಜನಾ...!!" ಎಂದು ಅಣ್ಣ ಜೋರಾಗಿ ಕೂಗುತಿದ್ದ.
"ಏನು??..."
"ನಾನ್ ಆಕಡೆಯ ಬಂಡೆಗೆ ಹೋಗಿ ಕೂತ್ಕೋತೀನಿ. ಆ ಕಡೆ ಚೆನ್ನಾಗಿದೆ, ನೀನ್ ಅಲ್ಲೇ ಇರು ಬಂದು ಬಿಡ್ತೀನಿ. ಆಯ್ತಾ??"
"ಬೇಡಾ...." ಎಂದು ಸಂಜನಾ ನೀರಿನತ್ತ ಓಡ ತೊಡಗಿದಳು.
"ಏನು ಭಯ ಪಡಬೇಡ. ಇಲ್ಲೇ ಇರೋದು. ನೋಡು ಇಲ್ಲೇ ಸಿಗುತ್ತೆ ಬಂದೆ ನಂಗೆ."
"ಆದ್ರೂ ಬೇಡಾ ಹೋಗೋದು. ಹೋಗಬೇಡ.!!"
"ಇಲ್ಲೇ ಇದೆ ಪ. ಬಂದುಬಿಡ್ತೀನಿ." ಎಂದು ನಿಧಾನವಾಗಿ ನಡೆದ ಬಾಲು.


ನೀರು ಬಲು ಜೋರಾಗಿತ್ತು. ಬಾಲುವಿನ ಕಾಲು ಪಾಚಿ ಕಟ್ಟಿದ ಕಲ್ಲುಗಳ ಮಧ್ಯ ಜಾಗವನ್ನು ಹುಡುಕುತ್ತಿತ್ತು. ಕೈ ಬಂಡೆಯನ್ನು ಬಿಗಿಯಾಗಿ ಹಿಡಿದಿತ್ತು. ಧೈರ್ಯ ಮನದಲ್ಲಿದ್ದರು ಹೃದಯದ ಬಡಿತದ ವೇಗ ಹೆಚ್ಚಿತ್ತು. ಒದ್ದೆಯಾದ ಕೂದಲಿನಿಂದ ನೀರು ತೊಟ್ಟಿಕ್ಕುತ್ತಿತ್ತು. ಹಿಂದೆ ತಿರುಗಿ ತಂಗಿಯ ಮುಖ ನೋಡಿ ಆಶ್ವಾಸನೆಯ ನಗು ಬೀರಿದನು.

ಬಲಕ್ಕೆ ತಿರುಗಿ ಮೇಲಿಂದ ಧುಮ್ಮಿಕ್ಕುತಿದ್ದ ನೀರನ್ನು ನೋಡಿದನು. ಜಾಗರೂಕತೆಯಿಂದ ಕಾಲನಿಟ್ಟು ಮುಂದಕ್ಕೆ ನಡೆದನು.
ನೀರಿನ ರಭಸವನ್ನು ಮೀರಿ ನಡೆಯುತ್ತಿದ್ದ ಬಾಲು. 'ಪಕ್ಕದ ಬಂಡೆ ಇನ್ನೇನ್ ಸ್ವಲ್ಪವೇ ದೂರವಿದೆ. ನಾನು ಹೋಗಬಹುದು' ಎಂದು ಧೃಡ ಮನಸ್ಸು ಮಾಡಿ ಮತ್ತೊಂದು ಹೆಜ್ಜೆ ಇಟ್ಟನು.

'ಬರಿ ಈ ಕಡೆ ಇಂದ ಆಕಡೆ, ಅಷ್ಟೇ.!' ಹಿಂದಿನ ಬಂಡೆಯ ಮೇಲಿನಿಂದ ಕೈಯನ್ನು ಬಿಟ್ಟು ನಿಂತನು. ಇನ್ನೊಂದು ಹೆಜ್ಜೆ ಇಟ್ಟನು. ದೊಡ್ಡ ಬಂಡೆ ಕಾಲಿಗೆ ಸಿಕ್ಕಿತು. ಪಾಚಿ ಕಟ್ಟಿದ್ದರಿಂದ ಕಾಲು ಜಾರಿತು.! ಎದೆಯ ಬಡಿತ ಇನ್ನು ಹೆಚ್ಚಿತು!
ತನ್ನ ತಾನು ಕಾಪಾಡಲು, ಬಲಗೈ ಕೆಳಗೆ ಹೋಗಿ ನೀರನ್ನು ಮುಟ್ಟಿತು. ಕಣ್ಣು ಆಕಾಶ ನೋಡಿತು.. ನೀರು ಕಣ್ಣಿಗೆ ಹೋದ ಕಾರಣ ಬಾಲು ಕಣ್ ಮುಚ್ಚಿದ. ಕ್ಷಣ ಮಾತ್ರದಲ್ಲೇ ಅವನು ಜಲಪಾತದ ತುದಿಯತ್ತ ತೇಲುತ್ತ ಹೋಗುತ್ತಿದ್ದ!

ತಂಗಿಯ ಕೂಗು ಕಿವಿಗೆ ತಟ್ಟುತ್ತಿತ್ತು. ಆದರೂ ಅವನು ಅಮಯಕನಾಗಿ ನಿಸ್ಸಹಾಯಕನಾಗಿ ನೀರಿನಲ್ಲಿ ತೇಲುತ್ತಾ ಮುಂದೆ ಹೋಗುತ್ತಿದ್ದ ಬಾಲು. ತಂಗಿಯ ಕೂಗು ಇನ್ನು ಜೋರಾಗಿತ್ತು, ಅವಳಿಗೇನು ಮಾಡಬೇಕೆಂದೇ ತೋಚದಂತಾಗಿತ್ತು.

ಬಾಲು ತುತ್ತ ತುದಿಗೆ ಬಂದುಬಿಟ್ಟನು. ಮೇಲಿನಿಂದ ಮುಂದಿದ್ದ ಹಸಿರು ರಾಶಿ ಚಿಕ್ಕ ಆಟದ ಮರಗಳಂತೆ ಕಾಣುತ್ತಿದ್ದವು.
ಬಾಲು ತುದಿಯಿಂದ ಕೆಳಕ್ಕೆ ಬೀಳ ತೊಡಗಿದನು. ಮನದಲ್ಲಿ ದುಗುಡ, ಭಯ, ಆತಂಕ ಎಲ್ಲ ಒಮ್ಮೆಲೇ ಕೂಡಿ ಮನಸಲ್ಲಿ ಬಂದವು. ಕೇವಲ ೬ ಸೆಕೆಂಡುಗಳಲ್ಲಿ ಬಾಲು ನೀರನ್ನು ಮುಟ್ಟಿದನು. ಸಾವಿರ ಚೂರಿಗಳು ಒಮ್ಮೆ ಇರಿದಂತಾಗಿತ್ತು. ಕಣ್ಣು ಬಿಡುವಷ್ಟರಲ್ಲಿ, ಏನ್ ಆಗಿದೆ ಎಂದು ಅರಿಯುವಷ್ಟರಲ್ಲಿ ಆಳದ ನೀರು ಬಾಲುವಿನ ಮುಖಕ್ಕೊಡಿಯಿತು. ಕಿವಿಯೊಳಗೆ ನೀರು ತುಂಬಿ ಹೊರ ಜಗತ್ತಿನ ಸದ್ದು ಕಡಿಮೆಯಾಗುತ್ತ ಬಂತು.

ಆ ಕ್ಷಣದಲ್ಲೇ ತಲೆಯ ಹಿಂದೆ ಏನು ಜೋರಾಗಿ ಬಡಿದಂತೆ ಅನಿಸಿತು....


ಜಗವೆಲ್ಲ ಖಾಲಿ... ಕಪ್ಪು ದೃಶ್ಯ ಆವರಿಸಿತು....... ಎಲ್ಲೆಡೆ ಶಾಂತಿ...


                                 ********************************************


---------------ವರುಣ್ ವಿವೇಕ್ ಜೆ